Pages

Monday, April 12, 2010

ಅಂದು ಇಂದು

ಗೆಳೆಯರೊಂದಿಗೆ ಆಡಿದ ಆದಿನಗಳು
ಈಗ ನೆನೆಯುತ ಮಿಡಿಯುತಿವೆ ಭಾವಗಳು
ಆಡಲು ಸಹಕರಿಸುತ್ತಿದ್ದವು ಬೀದಿ ದೀಪಗಳು
ನಮ್ಮ ಗಲಾಟೆಯನ್ನು ವಿರೋದಿಸುತ್ತಿದ್ದವು ಮನೆಯವರ ಒಲವುಗಳು

ಅಂದು ಬಾಲ್ಯದ ಗೆಳೆಯರು
ಜೊತೆಗೆ ಕುಣಿದು ಕುಪ್ಪಳಿಸುತ್ತಿದ್ದ ಏನು ಅರಿಯದ ಮೂಡರು
ಗಂಟೆ ಗಂಟಲೆ ಮಾತಡುತಿದ್ದ ಜೊತೆಗಾರರು
ಇಂದು ಸಿಕ್ಕರೆ ಏನು ನಡೆದಿಲ್ಲವೆಂದು ನಟಿಸುವ ಚೋರರು

ಅಂದು ಬಾಲಕನಿದ್ದೆ ಇಂದು ನಾನು ನಾನದೆ
ಅಂದು ಚಂದವಿತ್ತು ದಾರಿ, ಹೃದಯ ತಂತಿಯಲಿ
ಮಂದ ಬೆಳಕು ಇತ್ತು , ತುಂಬು ಚಂದಿರನಿತ್ತು
ಇಂದು ಹಂತ ಹಂತವು ಪಾಠ ಚಿಂತನೆಯ ರಸದೂಟ
ಅರಿತು ನುಡಿ ಕಲಿತು ನಡೆ

No comments:

Post a Comment