Pages

Friday, February 26, 2010

ನನ್ನ ಜೀವನದ ಕೆಲವೊಂದು ಹಾಸ್ಯಾಸ್ಪದ ಘಟನೆಗಳನ್ನು ಹಂಚಿ ಕೊಳ್ಳಲು ಈ ಬ್ಲಾಗನ್ನು ಬರೆಯುತಿದ್ದೇನೆ .
ಮೊದಲನೆ ಬ್ಲಾಗನ್ನು ಕನ್ನಡದಲ್ಲಿ ಪ್ರಾರಂಬಿಸಿ(ಏಕೆಂದರೆ AFTER 10TH STANDARD ಕನ್ನಡದಲ್ಲಿ ಜಾಸ್ತಿ ಬರೆದಿಲ್ಲ( I AM utilising this oppurtunity to write)
ನಂತರದ ಬ್ಲಾಗ್ಗಳನ್ನ ENGLISH ನಲ್ಲಿ ಬರೆಯುತ್ತೇನೆ .
ನಾನು BE ಓದುತ್ತಿರುವಾಗ ಹಾಸ್ಟೆಲ್ನಲ್ಲಿ ಇದ್ದೆ . ಅದು ಮಜೆಸ್ಟಿಕ್ ಗೆ ಬಹಳ ಹತ್ತಿರ ಇದೆ .ಅಲ್ಲಿ ನಡೆದ ಒಂದು ಹಾಸ್ಯ ಸನ್ನಿವೇಶವನ್ನು ಹಂಚಿ ಕೊಳ್ಳ ಬಯಸುತ್ತೇನೆ .
೧ ಬಾನುವಾರದ ದಿನ ನಾನು ಹಾಗು ನನ್ನ ಗೆಳೆಯ u ಮಧ್ಯಾನದ ಊಟವನ್ನು ಮಿಸ್ ಮಾಡಿಕೊಂಡಿದ್ದೆವು. ಯಾಕೆಂದರೆ ಬಟ್ಟೆ ತೊಳೆದು ಸ್ನಾನ ಮಾಡುವುದರಲ್ಲಿ ಲೇಟ್ ಆಗಿತ್ತು.
ಆ ದಿನಗಳಲ್ಲಿ ನಾವು ಹಾಸ್ಟೆಲ್ ನ ಹೊರಗಡೆಯ ಹೋಟೆಲ್ ಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದೆವು . ಏಕೆಂದರೆ ನಾವು monthly Rs 500 ಮಾತ್ರ ಖರ್ಚು ಮಾಡಬಹುದಿತ್ತು . ಬಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಬೇರೆದಿನಗಳಲ್ಲಿ ಮದ್ಯಾನದ ಊಟ ಹಾಸ್ಟೆಲ್ ನಲ್ಲಿ ಇರುತಿರಲಿಲ್ಲ ಏಕೆಂದರೆ ಅದು ಫ್ರೀ community ಹಾಸ್ಟೆಲ್ ಆಗಿತ್ತು .ಹಾಗು poor family financial condition ಇಂದ ನಾನು 500 ಮಾತ್ರ ಖರ್ಚು ಮಾಡಬಹುದಿತ್ತು . ( ಈಗ ಕೆಲವು ಸಮಯ rs500/day ಖರ್ಚು ಮಾಡುತ್ತೇವೆ some times 1೦೦೦ also:( .ನಾನು ಹಾಗು ನನ್ನ ಗೆಳೆಯ ಹತ್ತಿರದ ದೇವಸ್ಥಾನಕ್ಕೆ ಹೋಗಲು ನಿರ್ದರಿಸಿದೆವು . ಏಕೆಂದರೆ ಅಲ್ಲಿ ಶನಿವಾರ ರಾತ್ರಿ ಹಾಗು ಕೆಲವು ಸಲ ಬಾನುವಾರ ಮದ್ಯಾನ ಯಾರಾದರು ಭಕ್ತರು ಪ್ರಸಾದ ಹಂಚುತ್ತಿದ್ದರು . almost ಹಾಸ್ಟೆಲ್na ಎಲ್ಲ ಗೆಳೆಯರು ಅಲ್ಲಿಗೆ ಹೋಗುತಿದ್ದರು .
ನಾವು ಅಲ್ಲಿಗೆ ಹೇಗೆ ರೆಡಿ ಆದೆವು ಅಂದರೆ ನನ್ನ ಗೆಳೆಯ ಸ್ವಲ್ಪ ಚೆನ್ನಾಗೆ ಕಾಣುತಿದ್ದ ಒಳ್ಳೆ ಶರ್ಟ್ ನ್ನು ಹಾಕಿದ್ದ . ಇನ್ನು ನನ್ನ ಕಥೆ ನಾನು ಎಲ್ಲ ಬಟ್ಟೆಗಳನ್ನು ಬಾನುವರವೇ ತೊಳೆದದ್ದರಿಂದ ಒಂದು ಹಳೆಯ ಸುಕ್ಕು ಹಿಡಿದ ಇಸ್ತ್ರಿ ಎಂಬ ಪದದ ಅರ್ಥ ವೆ ಗೊತಿಲ್ಲದ ಶರ್ಟ್. ಹಾಗು ಪೈಂಟರ್ ಪ್ಯಾಂಟ್ . ನನ್ನ ಫೇಸ್ ಗೆ ಸೂಟ್ ಆಗದೆ ಇದ್ದಂತ ಕಟಿಂಗ್ (ಕುರಿಯ ತುಪ್ಪಟ ತೆಗೆದಂತೆ ) ಹವಾಯಿ ಚಪ್ಪಲಿ .
ಈ ಗೆಟಪ್ ನಲ್ಲಿ ಹೊರಟೆವು. ದೇವಸ್ಥಾನದ ಹೊರಗೆ ಬಹಳ ಜನ ಇದ್ದರು ದೇವಸ್ಥಾನ ಮಜೆಸ್ಟಿಕ್ ಗೆ ಬಹಳ ಸಮೀಪ ಇದ್ದದ್ದರಿಂದ ಜನಗಳು ಬಹಳ .
ದೇವಸ್ಥಾನದ ಗೇಟ್ ನ ಮುಂಬಾಗದಲ್ಲಿ ಇಬ್ಬರು ಬಂದವರನೆಲ್ಲ ಒಳಗೆ ಕಳಿಸುತ್ತಿದ್ದರು ಹೇಗೆಂದರೆ ಸ್ವಲ್ಪ ಚೆನ್ನಾಗಿ ಕಾಣುವವರನ್ನ ಹಾಗು ನೀಟ್ ಆಗಿ ಡ್ರೆಸ್ ಮಾಡಿದವರನ್ನ ದೇವಸ್ಥಾನದ ಒಳಗೆ ಹಾಗು ನನ್ನ ತರಹ ಡ್ರೆಸ್ ಮಾಡಿದವರನ್ನ ದೇವಸ್ಥಾನದ ಪಕ್ಕದ ಹೊರನ್ದದಲ್ಲಿ ಊಟಕ್ಕೆ ಕೂರಿಸುತ್ತಿದ್ದರು . ನನ್ನ ವೇಷ ಬೂಶನವನ್ನು ನೋಡಿ ನನ್ನನ್ನು ಹಾಗು ನನ್ನ ಗೆಳೆಯ u ನನ್ನು ಎರಡನೇ ಗ್ರೂಪ್ ನಲ್ಲಿ ಹಾಕಿದರು. ನನ್ನ ಆ ಸ್ಟೈಲ್ನಿಂದ u ಕೂಡ ನನ್ನ ಜೊತೆ ಬರ ಬೇಕಾಯ್ತು .ಅಲ್ಲಿ ಹೋಗಿ ನೋಡಿದರೆ ಕೇಳಬೇಕೆ ಮಜೆಸ್ಟಿಕ್ ನ ಬಿಕ್ಷ್ಹುಕರೆಲ್ಲ ಹಾಗು slum ನವರೆಲ್ಲ ಸೇರಿದ್ದರು . U ನನ್ನ ಕಡೆ ದುರುಗುಟ್ಟಿ ನೋಡಿದ ನಾನು ತಲೆ ತಗ್ಗಿಸಿದೆ .
ಆ ದಿನ ಊಟವನ್ನ ಮಜೆಸ್ಟಿಕ್ ಬಿಕ್ಷ್ಹುಕರು ಹಾಗು slum ಜನಗಳ ಜೊತೆ ಮಾಡಬೇಕಾಯಿತು. ಆ ಸಮಯದಲ್ಲಿ ನಮಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ . ಯಾವ ಸ್ಥಿತಿಗೆ ಬಂದೆವು ಅಂತ ನೋವ್ವಯಿತು ಕೇವಲ ಡ್ರೆಸ್ ಕೋಡ್ ನಿಂದಾಗಿ . U ನನ್ನನ್ನು (ನನ್ನ ಡ್ರೆಸ್ ನ್ನು ಅಂತ ಹೇಳಬಹುದು ) ದವಸ್ಥಾನದಿಂದ ಹಾಸ್ಟೆಲ್ ಸಿಗುವವರೆಗೂ ಬಯ್ದಿದ್ದೆ ಬಯ್ದಿದ್ದು . ನನ್ನ ತಪ್ಪು ಇದ್ದದ್ದರಿಂದ ನಾನು ಸುಮ್ಮನಿರಬೇಕಾಯಿತು .ಆ ದಿನ ನಾವು ಹಾಸ್ಟೆಲ್ ಗೆಳೆಯರ ನಗೆ ಪಾತಲಿಕೆ ಗೆ ಗುರಿ ಆಗಿದ್ದೆವು.
ಇದು ನನ್ನ 1 ಕಥೆ ..ಆ ದಿನದಿಂದ ನಾನು ಯಾವುದೇ ದೇವಸ್ಥಾನಕ್ಕೆ ಹೋದರು ಸ್ಮಾರ್ಟ್ ಹಾಗು ಜೆಂಟಲ್ ಮ್ಯಾನ್ ಆಗಿ ಹೋಗುತ್ತೇನೆ .
ಮೊನ್ನೆ ನಾನು ಹಾಗು ನನ್ನ ಇನ್ನೊಬ್ಬ ಗೆಳೆಯ ರಾಗಿ ಗುಡ್ಡ temple ge hogiddevu ಅಲ್ಲೂ ಸಹ ಪ್ರಸಾದ ಕೊಡುತಿದ್ದರು ನಾನು ಅವನನ್ನು ಅಲ್ಲಿಗೆ ಹೋಗ ಬಿಡದೆ ಬೈಕ್ ಸಿಗುವವರೆಗೂ ಕರೆದುಕೊಂಡು ಬಂದು ನನ್ನ ಮೇಲಿನ ಕಥೆ ಹೇಳಿದೆ ಇಬ್ಬರು ಬಿದ್ದು ಬಿದ್ದು ನಕ್ಕೆವು .:)))))

No comments:

Post a Comment