ಕೆಲವು ಸಲ ನಾನು ಪೂರ್ತಿ ಸೊಂಬೆರಿ ಮತ್ತು ಆಲಸಿ ಆಗಿರುತ್ತೇನೆ , ಹೇಗೆಂದರೆ ಹೊರಗೆ ಹೋಗಿ ಊಟ ಮಾಡುವವರು ಯಾರೆಂದು ಊಟವನ್ನೇ ಮಾಡುವುದಿಲ್ಲ .. ಆ ದಿನ ನನ್ನ ಪಾಲಿಗೆ ಸೋಂಬೇರಿ ದಿನವಾಗಿತ್ತು .film ನ ನೋಡಿ ಮುಗಿದ ತಕ್ಷಣ ಸುಮ್ಮನೆ ಆಕಡೆ ಈಕಡೆ ನೋಡುತಿದ್ದೆ ಇದ್ದಕ್ಕಿದ್ದಂತೆ ನನ್ನ ಕಣ್ಣು 5 ವರ್ಷದಿಂದ open ಮಾಡದೆ ಇರುವ briefcase ಕಡೆ ಕೇಂದ್ರಿಕೃತ ವಾಯಿತು . ನನ್ನಲ್ಲಿ ಇದ್ದ ಸೋಂಬೇರಿತನ ಮಾಯವಾಗಿ Briefcase ತೆಗೆಯಬೇಕೆಂಬ ಕುತೂಹಲ ಮೂಡಿತು .Briefcase ಏನು ದೂಳು ಹಿಡಿದಿರಲಿಲ್ಲ ಹೊರಗಡೆ ಇಂದ ನೋಡಿದರೆ , ಯಾಕೆಂದರೆ ವಾರಕ್ಕೆ ಒಂದು ದಿನ ರೂಂ ನ್ನು clean ಮಾಡುತಿದ್ದೆ . ಅದರಲ್ಲಿ ನನ್ನ pu ದಿಂದ ಹಿಡಿದು BE ವರೆಗಿನ college ID card ಗಳು ರಶೀದಿಗಳು ಇದ್ದವು . ನಂತರ ಒಂದು file ನನ್ನ ಕಣ್ಣಿಗೆ ಕಾಣಿಸಿತು . ಅದನ್ನು ತೆಗೆದು ನೋಡಿದರೆ ನೂರಾರು film ಟಿಕೆಟ್ ಗಳು ಇದ್ದವು . ಆಗ ಹಿಂದಿನದನ್ನು ನೆನಪು ಮಾಡಿಕೊಂಡೆ. ಏನೆಂದರೆ ಯಾವುದಾದರು film ನ್ನು theater ನಲ್ಲಿ ನೋಡಿದರೆ ಅದರ ಟಿಕೆಟನ್ನು ಜೋಪಾನವಾಗಿ ಕೂಡಿ ಇಡುವುದು (ಅದು ಒಳ್ಳೆಯ ಹವ್ಯಾಸವೋ ಕೆಟ್ಟದ್ದೋ ಗೊತ್ತಿರಲಿಲ್ಲ , ಇಂದು ಅದನ್ನು ನೆನೆಸಿಕೊಂಡು ನಗುವುದು ಖಂಡಿತ ) ಅದನ್ನು ಜೋಪಾನವಾಗಿ ಇಡುವುದು ಅಷ್ಟೇ ಅಲ್ಲ ಅದರ ಮೇಲೆ ಆ ಸಿನಿಮಾದ ಹೆಸರನ್ನು ಬರೆದಿಡುತ್ತಿದ್ದೆ . ಅದು BE 6th semister ವರೆಗೂ ಇತ್ತು ಆಮೇಲೆ ಆ ಹವ್ಯಾಸ ಅಲ್ಲೇ ನಿಂತಿತು . ಕಾರಣ ನೆನಪಿಗೆ ಬರುತ್ತಿಲ್ಲ .( ನನಗೆ 6th ಸೆಮಿಸ್ಟರ್ ಟಿಕೆಟ್ ಲಾಸ್ಟ್ ಸಿಕ್ಕಿದ್ದು ಮೊನ್ನೆ ).
ಹೇಗೂ ಈಗ ಕೆಲಸವಿಲ್ಲ ಆಫೀಸ್ ಗೆ ರಾಜ ಎಂದುಕೊಂಡು film ಗೆ ಖರ್ಚು ಮಾಡಿದ ಲೆಕ್ಕ ಮಾಡಿದೆ ಸುಮಾರು 6000 ರೂಪಾಯಿ ಹಣವನ್ನು ಫಿಲಂ ಗೆ ಎಂದು ಹೇಳಿ ಉಪಯೋಗಿಸಿದ್ದೆ . ಆಮೇಲೆ ನನಗೆ ನೆನಪಿಗೆ ಬಂದದ್ದು ನಾನು Theater ನಲ್ಲಿ ನೋಡಿದ ಮೊದಲ ಚಲನ ಚಿತ್ರ 1st PUC ನಲ್ಲಿ ಇದ್ದಾಗ ಅದು "ಯಾರೇ ನೀನು ಚೆಲುವೆ " ನಾನು ಆ film ನ್ನು ನೋಡುವ ಮುಂಚೆ ನನಗೆ ಇದ್ದ ಕಲ್ಪನೆ ಏನಪ್ಪಾ ಅಂದರೆ Theater ನಲ್ಲಿ ಮುಂದೆ ಕುಳಿತು ಸಿನಿಮ ನೋಡಿದರೆ ಚೆನ್ನಾಗಿರುತ್ತೆ ಅಂದುಕೊಂಡು 3rd ಕ್ಲಾಸ್ (Ghandi class) ಟಿಕೆಟ್ ತೆಗೆದುಕೊಂಡು ಸುತ್ತ ಮುತ್ತಲು ಕಳ್ಳನ ತರಹ ನೊಡಿದಎ ಯಾಕೆಂದರೆ ನನಗೆ ಪರಿಚಯವಿರುವವರು ಯಾರಾದರು ಇದ್ದಾರೆಯೇ ಎಂಬ ಭಯ , ಓದುವ ಮಕ್ಕಳು film ನೋಡುವುದು ಅಪರಾದ ಎನ್ನುವ ಬಾವನೆ ನನ್ನಲ್ಲಿ ಮನೆಮಾಡಿತ್ತು .ಒಳಗೆ ಹೋಗಿ ನೋಡಿದಾಗಲೇ ನನಗೆ 2nd class ಬಾಲ್ಕನಿ ಯಾ ಅರಿವಾಗಿದ್ದು .ಅಂತು ಇಂತು ಕತ್ತನ್ನು ಪೂರ ಮೇಲಕ್ಕೆ ನೋಡಿ ಫಿಲಂ ಮುಗಿಸಿ ಹಾಸ್ಟೆಲ್ ಗೆ ಹೋಗಿದ್ದೆ .
ಇನ್ನೊಂದು ದಿನ ನಾನು ಹಾಗು ನನ್ನ ಗೆಳೆಯ ಅದೇ ಥಿಯೇಟರ್ ಗೆ film ಗೆ ಹೋಗಿದ್ದೆವು (ಫಿಲಂ ಹೆಸರು ಮರೆತಿದ್ದೇನೆ ) , ಎಂದಿನಂತೆ ಗಾಂಧಿ ಕ್ಲಾಸ್ ಟಿಕೆಟ್ . Interval ಆದ ಮೇಲೆ ನನ್ನ ಗೆಳೆಯನಿಗೆ ಅದು ಯಾವ ತರಲೆ ಐಡಿಯಾ ಬಂತೋ ಗೊತ್ತಿಲ್ಲ "ಯಾರು ನೋಡುತ್ತಿಲ್ಲ 1st ಕ್ಲಾಸ್ ಗೆ ಹೋಗಿ ಕೂರೋಣ ಎಂದ ನಾನು ಬೇಡ ಎಂದು ಎಷ್ಟು ಹೇಳಿದರು ಅವನು ನನ್ನನ್ನು ಬಿಡದೆ ಕರೆದುಕೊಂಡು ಹೋದ . ನಮ್ಮ ದುರದ್ರುಸ್ತಕ್ಕೋ ಏನೋ ಆ ದಿನ ಥಿಯೇಟರ್ ನಲ್ಲಿ ಬೆರಳೆನಿಕೆಯಸ್ತು ಜನರಿದ್ದರಿಂದ ಅಲ್ಲಿಯ ಗುಮಾಸ್ತರಿಗೆ ನಮ್ಮನ್ನು ಕಂಡು ಹಿಡಿಯುವುದು ಬಹಳ ಸುಲಭವಾಗಿತ್ತು .ಅಂದುಕೊಂಡಂತೆ ನಾವು ಸಿಕ್ಕಿ ಬಿದ್ದೆವು ನನ್ನನ್ನು ಹಾಗು ನನ್ನ ಸ್ನೇಹಿತನನ್ನು ಹೊರಗೆ ಕರೆದು ಕೊಂಡು ಹೋಗಿ ನನ್ನ ಸ್ನೇಹಿತನಿಗೆ ನನಗೆ ಚೆನ್ನಾಗಿ ಬೈದರು ಅವನು ಇನ್ನೇನು ಹೊಡೆಯ ಬೆಕೆನಿಸುವಸ್ಟರಲ್ಲಿ ಅಲ್ಲಿ ಒಬ್ಬ ಮುದುಕ ನಮ್ಮನ್ನು ಬೈಯುತಿದ್ದವನಿಗೆ "ಹೋಗಲಿ ಬಿಡೋ ಹುಡುಗರೋ ಏನೋ ಫಿಲಂ ನೋಡೋಕೆ ಬಂದಿದಾರೆ ಜನ ಬೇರೆ ಇಲ್ಲ ಕುಳಿತುಕೊಳ್ಳಲಿ ಬಿಡು , ಇನ್ನೊಂದು ಸಲ ಹಾಗೆ ಮಾಡ ಬೇಡಿ ಎಂದು ಹೇಳಿ ಕಳುಹಿಸು " ಎಂದರು ಅವನು ತಾತನ ಮಾತಿಗೆ ಬೆಲೆ ಕೊಟ್ಟು ನಮ್ಮನ್ನು ಬಿಟ್ಟ ಹೋದ ಜೀವ ನಮಗೆ ವಾಪಾಸ್ ಬಂದಂತಾಯಿತು .ಅಲ್ಲಿಂದ ಇಲ್ಲಿಯವರೆಗೆ ಯಾವ ಆ ತರಹದ ತಪ್ಪನ್ನು ಮಾಡಿಲ್ಲ Gandhi class ನಲ್ಲಿ ಸಿನಿಮಾನು ನೋಡಿಲ್ಲ .
ಈಗ ನೆನೆದರೆ ಜೀವನದಲ್ಲಿ ಎಷ್ಟೊಂದು ಬದಲಾವಣೆಗಳು ಆಗಿವೆ ಅನ್ನಿಸುತ್ತಿದೆ .

No comments:
Post a Comment